ಹಳೇ ಫಿಲ್ಮ್ ಗಳಲ್ಲಿ ಅದೇನೋ ನೈಜತೆ ಇತ್ತು. ಇಲ್ಲದೇ ಇದ್ದಲ್ಲಿ ೧೦-೧೫ ವರ್ಷಗಳ ಹಿಂದೆ ನೋಡಿದ ಫಿಲ್ಮ್ ಕಥೆಗಳನ್ನ ನಾವು ಇಂದೂ ನೆನಪಿನಲ್ಲಿ ಇಡುತ್ತಿದ್ದೆವೆ? ಇತ್ತೀಚಿಗೆ ನನಗಾದ ಅನುಭವ ಅದೇ.
ಬೆಂಗಳೂರಿನಲ್ಲಿ ನಡೀತಿದ್ದ ಪುಸ್ತಕೋತ್ಸವದಲ್ಲಿ ನನ್ನನ್ನ ಆಕರ್ಷಿಸಿದ್ದು ಹಳೆ ಫಿಲ್ಮ್ ಗಳ ಡಿಸ್ಕ್ ಗಳು. ಸುಮಾರು ಹಳೆಯ ಫಿಲ್ಮ್ ಗಳನ್ನೂ ಕೊಂಡುಕೊಂಡೆ. ಕಳೆದ ೩-೪ ದಿನದಿಂದ ಅವನ್ನು ನೋಡುವುದೇ ಕೆಲಸ. :)
ಆಶ್ಚರ್ಯ ಎಂದರೆ ಆ ಎಲ್ಲ ಫಿಲ್ಮ್ ಗಳನ್ನೂ ನಾನು ತುಂಬ ಹಿಂದೇನೆ ನೋಡಿದ್ದೇನೆ, ವರ್ಷಗಳ ಹಿಂದೆ. ಅದರೂ, ಇಂದೂ, ಆ ಕಥೆಗಳು ಅಷ್ಟೇ ಹೊಸದೆನ್ನಿಸುತ್ತವೆ. ಆ ಚಿತ್ರಗಳಲ್ಲಿರುವ ಪಾತ್ರಗಳು ನಾವೆಯೇನೋ ಅನ್ನಿಸುವಷ್ಟು ಮನಸ್ಸಿಗೆ ಹತ್ತಿರವಾಗಿವೆ. ಆ ಕಾರಣದಿಂದಲೇ ಏನೋ ಮತ್ತೆ ಮತ್ತೆ ನೋಡಿದರೂ ಮನಸ್ಸಿಗೆ ಬೇಸರವೆನಿಸುವುದಿಲ್ಲ. ಅಂದಿನ ಹಾಡುಗಳೂ ಅಷ್ಟೇ. ಹಿತವಾದ, ಮನಸ್ಸಿಗೆ ನಾಟುವ ಬಾಷೆಯನ್ನೂಳಗೊಂಡ ಆ ಹಾಡುಗಳು ಇಂದಿಗೂ ಪ್ರಸ್ತುತ. ಅನಂತನಾಗ್, ಲಕ್ಷ್ಮಿಯಂತಹ ಪ್ರಬುದ್ಧ ನಟರಿದ್ದರಂತೂ ಆ ಚಿತ್ರಗಳಿಗೆ ಇನ್ನಷ್ಟು ಕಳೆ ಹಾಗು ಸಹಜತೆಯ ಸ್ಪರ್ಶ. ಬೆಂಕಿಯ ಬಲೆ, ಗಾಳಿ ಮಾತು, ಚೆಂದನದ ಗೊಂಬೆಯಂತಹ ಚಿತ್ರಗಳು ಇಂದೂ ಬಂದರೆ ಅದೆಷ್ಟು ಚೆನ್ನ!!
Wednesday, November 19
Subscribe to:
Post Comments (Atom)
0 comments:
Post a Comment